ಹುಮ್ನಾಬಾದ್

ಪರಿಚಯ:
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ ಗ್ರಾಮದ ನೆಹರೂ ನಗರzಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಚ್ಚಹಸಿರಿನ ಆವರಣ ಬಂದವರನ್ನು ಹಾರ್ದಿಕವಾಗಿ ಸ್ವಾಗತಿಸುತ್ತದೆ. ಮಕ್ಕಳು ಆಗಷ್ಟೇ ಗಿಡಗಳಿಗೆಲ್ಲ ನೀರುಣಿಸಿದ್ದರು, ಬೆಳಗಿನ ಪ್ರಾರ್ಥನಾ ಸಭೆ ಆಗತಾನೆ ಮುಗಿದಿತ್ತು. ತರಗತಿಗಳು ಇನ್ನೂ ಆರಂಭವಾಗಿರಲಿಲ್ಲ. ಆದರೆ ಮಧ್ಯಾಹ್ನದ ಬಿಸಿಯೂಟದ ತಯಾರಿ ಆಗಲೇ ಶುರುವಾಗಿದ್ದವು. ಶಿಕ್ಷಕರಾದ ರಾಮನ ಗೌಡ ಅವರು ತರಗತಿಯಲ್ಲಿ ಹಾಜರಾತಿಯನ್ನು ಪಡೆದುಕೊಳ್ಳುತ್ತಿದ್ದರು. ನಾವು ನೇರವಾಗಿ ಮುಖ್ಯ ಶಿಕ್ಷಕಿಯವರ ಕೊಠಡಿಯತ್ತ ಹೋದೆವು. ಮುಖ್ಯ ಶಿಕ್ಷಕಿ ಅನುರಾಧಾ ನಮ್ಮ ನಿರೀಕ್ಷೆಯಲ್ಲಿದ್ದರು.
ಈ ಶಾಲೆಯಲ್ಲಿರುವ ಶಿಕ್ಷಕರ ಸಂಖ್ಯೆ ಕೇವಲ ಮೂರು. ಇಲ್ಲಿ ೫೫ ವಿದ್ಯಾರ್ಥಿಗಳಿದ್ದಾರೆ. ಈ ಗ್ರಾಮದ ಒಟ್ಟು ಜನಸಂಖ್ಯೆ ೭೬೫. ಈ ಶಾಲೆಗೆ ಬರುವವರೆಲ್ಲ ಈ ಗ್ರಾಮದ ಮಕ್ಕಳೇ. ಇಲ್ಲಿರುವ ೮೬ ಕುಟುಂಬಗಳ ಪೈಕಿ ಅಲ್ಪಸಂಖ್ಯಾತ ಸಮುದಾಯದ ಹತ್ತು ಕುಟುಂಬಗಳನ್ನು ಹೊರತುಪಡಿಸಿದರೆ ಉಳಿದವೆಲ್ಲ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳು.

ಕನ್ನಡ
19210 ನೊಂದಾಯಿತ ಬಳಕೆದಾರರು
7451 ಸಂಪನ್ಮೂಲಗಳು