ಈ ಅಂಕಣಕ್ಕೆ ಕುಡುಗೆ ನೀಡಿ ಶಾಲಾ ವಿಜ್ಞಾನ ಶಿಕ್ಷಣಕ್ಕೆ ಒಬ್ಬ ಸಂಶೋಧಕ ಯಾವ ರೀತಿಯ ಕೊಡುಗೆ ನೀಡಬಹುದು?

ಮಕ್ಕಳಿಗೆ ಒಂದು ಪುಸ್ತಕದಿಂದ ಓದಿ ವಿಜ್ಞಾನದ ವಾಸ್ತವಾಂಶಗಳನ್ನು ಹೇಳುವ ಬದಲು ತಾವೇ ಪ್ರಯೋಗಗಳನ್ನು ಮಾಡಿ ವಿಜ್ಞಾನವನ್ನು ಕಂಡುಕೊಳ್ಳುವಂತೆ ಮಾಡಬಹುದು ಅಥವಾ ಯಾವುದೋ ಸಂಶೋಧನೆ ಇಲ್ಲವೇ  ಸಂಶೋಧಕನ ಬಗ್ಗೆ ಇರುವ ಒಂದು ಚಲನಚಿತ್ರವನ್ನು ತೋರಿಸಿ ಅಥವಾ ಒಂದು ಕಥೆಯನ್ನು ಓದಿಸಿ ಶಿಕ್ಷಕರು ಅವರಲ್ಲಿ ವಿಜ್ಞಾನದ ಜಿಜ್ಞಾಸೆ ಪ್ರಚೋದಿಸಬಹುದು

೧. ಶಾಲಾ ವಿಜ್ಞಾನ ಶಿಕ್ಷಣಕ್ಕೆ ಒಬ್ಬ ಸಂಶೋಧಕ ಯಾವ ರೀತಿಯ ಕೊಡುಗೆ ನೀಡಬಹುದು?
ಸಂಶೋಧಕರು ಆಸಕ್ತ ವಿದ್ಯಾರ್ಥಿಗಳಿಗೆ ಪ್ರೇರಣಾಶಕ್ತಿಯಾಗಿ, ಅವರ ಆಸಕ್ತಿಗೆ ನೀರೆರೆದು ಪೋಷಿಸಬಹುದು. ವಿಜ್ಞಾನಿಗಳೊಂದಿಗೆ ಸಣ್ಣ ಸಂವಾದಗಳನ್ನು ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳು ಅವರೊಂದಿಗೆ ಪ್ರಸಕ್ತ ವೈಜ್ಞಾನಿಕ ಸಂಶೋಧನೆಗಳನ್ನು ಚರ್ಚಿಸಲು ಸಾಧ್ಯವಾಗುವುದಷ್ಟೇ ಅಲ್ಲದೆ, ಸಂಶೋಧನಾ ಕ್ಷೇತ್ರದ ನಿಜವಾದ ಅನುಭವನ್ನು ಪಡೆಯಲು ಕೂಡ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳನ್ನು ಅವರ ಬೇಸಿಗೆ/ಚಳಿಗಾಲದ ರಜಾ ಕಾಲದಲ್ಲಿ ತಮ್ಮ ಪ್ರಯೋಗಶಾಲೆಯನ್ನು ಗಮನಿಸಲು ಅವಕಾಶ ಮಾಡಿಕೊಡುವ ಮೂಲಕ ಸಂಶೋಧಕರು ವಿದ್ಯಾರ್ಥಿಗಳಿಗೆ ಸಂಶೋಧನಾ ಕ್ಷೇತ್ರದ ಅನುಭವವನ್ನು  ಇನ್ನೊಂದು ರೀತಿಯಲ್ಲಿ ದೊರಕಿಸಿಕೊಡಬಹುದು.

 ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್ (IISER) -  ಮತ್ತು  ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) [ Indian Institute of Science Education and Research (IISER) -  Indian Institute of Technology (IIT)] ಮಾದರಿಯಲ್ಲಿ ರಚಿತವಾದ ವೈಜ್ಞಾನಿಕ ಶಿಕ್ಷಣಕೇಂದ್ರಗಳು ಔಟ್‌ರೀಚ್ ಕಾರ್ಯಕ್ರಮಗಳನ್ನು ಹಮ್ಮಿಕೊಳುತ್ತಿವೆ . ಭಾರತದಲ್ಲಿ ಐದು ಕಡೆ ಈ ಕೇಂದ್ರಗಳನ್ನು ಸ್ಥಾಪಿಸಲಾಗಿದೆ - ಮೊಹಾಲಿ, ಪುಣೆ, ಭೋಪಾಲ, ಕೊಲ್ಕೊತ್ತಾ, ಮತ್ತು ತಿರುವನಂತಪುರ.  ಈ ಕೇಂದ್ರಗಳು ಇವು ನಿಯಮಿತವಾಗಿ ತಮ್ಮಲ್ಲಿ ಶಾಲಾ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಔಟ್‌ರೀಚ್ ಕಾರ್ಯಕ್ರಮಗಳನ್ನು ಹಮ್ಮಿಕೊಳುತ್ತ್ತಿವೆ. ಇವುಗಳನ್ನು ಬಿಟ್ಟರೆ ಆಸಕ್ತ ಶಾಲೆಗಳು ಭೇಟಿ ಕೊಡಬಹುದಾದ ಇನ್ನೊಂದು ವೈಜ್ಞಾನಿಕ ಸಂಶೋಧನಾ ಕೇಂದ್ರವೆಂದರೆ ಮುಂಬೈಯಲ್ಲಿರುವ ಹೋಮಿ ಭಾಭಾ ವಿಜ್ಞಾನ ಶಿಕ್ಷಣ ಕೇಂದ್ರ (Homi Bhabha Centre for Science Education).

೨. ವಿಜ್ಞಾನವನ್ನು ವೃತ್ತಿಯಾಗಿ ತೆಗೆದುಕೊಳ್ಳುವ ವಿಚಾರದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸಾಮಾನ್ಯವಾಗಿ ಇರುವ ದೊಡ್ಡ ತಪ್ಪು ಕಲ್ಪನೆ ಏನು?

ವೈಜ್ಞಾನಿಕ ಕ್ಷೇತ್ರದಲ್ಲಿ ಒಬ್ಬ ವಿಜ್ಞಾನಿಯಾಗಿ ನಾವು ನಮ್ಮ ಸ್ಥಾನವನ್ನು ಕಂಡುಕೊಳ್ಳಲು ಸಾಕಷ್ಟು ಸಮಯ ಹಿಡಿಯುತ್ತದಾದರೂ, ವೈಜ್ಞಾನಿಕ ಸಂಶೋಧನಾ ಕೆಲಸವು ಸಾಮಾನ್ಯವಾಗಿ ಎಲ್ಲರು ಅಂದುಕೊಳ್ಳುವಂತೆ ನಿಮ್ಮನ್ನು ಸುಸ್ತು ಮಾಡುವಂತಹ ರೀತಿಯ ನೀರಸ ಕೆಲಸ ಅಲ್ಲ. ಅಷ್ಟೇ ಅಲ್ಲದೆ ವಿಜ್ಞಾನಿಯಾದವನ ವೇತನ ಅಷ್ಟಕಷ್ಟೆ ಎಂಬುದು ಕೂಡ ತಪ್ಪು ಅಭಿಪ್ರಾಯ. ವೈಜ್ಞಾನಿಕ ಅಧ್ಯಯನದ ಬಗ್ಗೆ ನಿಮ್ಮ ಆಸಕ್ತಿ ಅಚಲವಾಗಿದ್ದರೆ, ಸಂಶೋಧನಾ ವೃತ್ತಿಯ ಏರಿಳಿತಗಳು ನಿಮಗೆ ಖುಶಿ ಕೊಡುತ್ತವೆ.

೩. ಸಂಶೋಧನೆಯನ್ನು ಒಂದು ವೃತ್ತಿಯಾಗಿ ಆಯ್ದುಕೊಳ್ಳುವಲ್ಲಿ ಇರುವ ಅವಕಾಶಗಳು ಯಾವುವು? ಮುಂದಿನ ಕೆಲವು ದಶಕಗಳಲ್ಲಿ ಕೇಂದ್ರಾಕರ್ಷಣೆ ಆಗಲಿರುವ ವಿಜ್ಞಾನದ ಕೆಲವು ಕ್ಷೇತ್ರಗಳು ಯಾವುವು?

ಲೊಲಿತಿಕಾ ಮಂಡಲ್ ಅವರು ಮೊಹಾಲಿಯಲ್ಲಿರುವ Indian Institute of Science Education and Research (IISER) ಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ. ರಕ್ತ ಕೋಶಗಳು ಹೇಗೆ ಉತ್ಪತ್ತಿಯಾಗುತ್ತವೆ ಎಂಬ ಬಗ್ಗೆ ಅವರು ಕೈಗೊಂಡ ಸಂಶೋಧನೆಯು ಜಗತ್ತಿನಾದ್ಯಂತ ಈ ವಿಷಯದ ಬಗ್ಗೆ ಹೊಸ ಅರಿವನ್ನು ಮೂಡಿಸಿದೆ. ಈ ಸಂದರ್ಶನದಲ್ಲಿ ಅವರು ವಿಜ್ಞಾನಿಯಾಗಿ ತಮ್ಮ ಜೀವನಾನುಭವಗಳನ್ನು ಮತ್ತು ಒಳನೋಟಗಳನ್ನು ಹಂಚಿಕೊಂಡಿದ್ದಾರೆ.   
 

ವೈಜ್ಞಾನಿಕ ವೃತ್ತಿ ಇಂದು ಕೇವಲ ಒಬ್ಬ ಶಿಕ್ಷಕನಾಗಿರುವುದಕ್ಕೆ ಅಥವ ಒಬ್ಬ ಪ್ರೊಫ಼ೆಸರ್ ಆಗಿರುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಜ್ಞಾನವನ್ನು ಅಧ್ಯಯನದ ವಸ್ತುವಾಗಿ ಮಾಡಿಕೊಂಡ ವಿದ್ಯಾರ್ಥಿಗಳು ಇಂದು ಹಲವು ರೀತಿಯ ಉದ್ಯೋಗಗಳಲ್ಲಿ ನಿರತರಾಗಿದ್ದಾರೆ - ಮೂಲ ಸಂಶೋಧನಾ ಕ್ಷೇತ್ರಗಳಿಂದ ಹಿಡಿದು (ಶೈಕ್ಷಣಿಕ ಅಥವ ಕೈಗಾರಿಕಾ ಸಂಸ್ಥೆಗಳಲ್ಲಿ), ವೈಜ್ಞಾನಿಕ ಸಂವಹನ ಮತ್ತು ಪತ್ರಿಕೋದ್ಯಮ,ಆಡಳಿತ ನಿರ್ವಹಣೆ ಮತ್ತು ಕಾನೂನು (ಇಂಟೆಲೆಕ್ಚುವಲ್ ಪ್ರಾಪರ್ಟಿ ರೈಟ್ಸ್ ಮತ್ತು ಪೇಟೆಂಟುಗಳಿಗೆ ಸಂಬಂಧಪಟ್ಟಂತೆ), ಇತ್ಯಾದಿ. ವೈಜ್ಞಾನಿಕ ಹಿನ್ನೆಲೆ ಇರುವ ಪತ್ರಕರ್ತರು ಸಂಶೋಧನಾ ಕ್ಷೇತ್ರದ ಹೊಸ ಅವಿಷ್ಕಾರಗಳನ್ನು ಜನರಿಗೆ ಸುಲಭವಾಗಿ ತಲುಪುವಂತೆ ಬರೆಯಬಹುದು. ಇದರ ಜೊತೆಗೆ ಇಂಗ್ಲಿಷ್ ಭಾಷೆಯಲ್ಲಿ ಪರಿಣತಿ ಇರುವವರು ಸಂಶೋಧನಾ ಲೇಖನಗಳನ್ನು ಬರೆಯಲು ಸಹಾಯ ಮಾಡಬಹುದು. ವಿಜ್ಞಾನದ ಹಿನ್ನೆಲೆ ಇರುವ ಒಬ್ಬ ಪೇಟೆಂಟ್ ತಜ್ಞ ವಕೀಲ ’ ಏನನ್ನು ಪೇಟೆಂಟ್ ಮಾಡಬಹುದು ಅಥವ ಮಾಡಬಾರದು’ ಎಂಬುದನ್ನು ಕುರಿತು ಒಬ್ಬ ಸಂಶೋಧಕನಿಗೆ ಮಾರ್ಗದರ್ಶನ ನೀಡಬಹುದು.

ಬಹುಶಾಸ್ತ್ರೀಯ ಅಧ್ಯಯನ ಮಾರ್ಗಗಳು, ಹೊಸ ತಂತ್ರಜ್ಞಾನಗಳು ಮತ್ತು ಅತ್ಯುತ್ತಮ ಸಾಧನ ತಂತ್ರಜ್ಞಾನ ಲಭ್ಯ ಇರುವ ಈಗಿನ ಸಂದರ್ಭದಲ್ಲಿ ನಮ್ಮ ಸಂಶೋಧಕರು ಹೊಸ ನವೀನ ಶೃಂಗಗಳನ್ನು ತಲುಪಬಹುದು ಮತ್ತು ಹಿಂದೆ ಮನಗಾಣದಿದ್ದ ಹೊಸ ಕನಸುಗಳನ್ನು ನನಸಾಗಿಸಬಹುದು. ಹಾಗಾಗಿ ಮುಂದಿನ ದಶಕಗಳಲ್ಲಿ ಯಾವ ಕ್ಷೇತ್ರಗಳು ಕೇಂದ್ರಾಕರ್ಷಣೆ ಆಗಬಹುದು ಎಂದು ಈಗಲೇ ಹೇಳುವುದು ಕಷ್ಟ.  

 

19170 ನೊಂದಾಯಿತ ಬಳಕೆದಾರರು
7433 ಸಂಪನ್ಮೂಲಗಳು