ಈ ಅಂಕಣಕ್ಕೆ ಕುಡುಗೆ ನೀಡಿ ನವೀನ ಚಿಂತನೆಯ ಮಾದರಿ ಶಿಕ್ಷಕ ಶ್ರೀ ಎಚ್.ಎಸ್.ಪರಮೇಶ್,

    ಬೆಂಗಳೂರಿನ ಬಳಿಯ ಬಂಜಾರು ಪಾಳ್ಯದ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ ಚಾಲಕ ಶಕ್ತಿ ಶ್ರೀ ಪರಮೇಶ್ ಅವರು.  ಸದರಿ ಶಾಲೆಗೆ ಅವರು ನೀಡಿರುವ ಕೊಡುಗೆ ಮತ್ತು ಬೊಧನಾ ವಿಧಾನಗಳಲ್ಲಿ ಅವರ ನವನವೀನ ವಿಧಾನಗಳು ಅವರಿಗೆ ಅನೇಕ ಶ್ಲಾಘನೆಯನ್ನು ದೊರಕಿಸಿ ಕೊಟ್ಟಿವೆ.

ವಿಶಿಷ್ಟ ಶಿಕ್ಷಕ:

     ಬಂಜಾರು ಪಾಳ್ಯವು ಬೆಂಗಳೂರಿನಿಂದ ಸುಮಾರು 350 ಕಿ.ಮೀ. ದೂರದಲ್ಲಿರುವ ಒಂದು ಸಣ್ಣ ಗ್ರಾಮ.  ನಗರ ಜೀವನದ ಜಂಜಡದಿಂದ ದೂರವಾಗಿ ಹಸಿರು ಬೆಳುವಲಗಳ ನಡುವೆ ಇರುವ ಪುಟ್ಟ ಗ್ರಾಮ ಇದು.  ನಾಳಿನ ಬದುಕನ್ನು  ಹಸನಾಗಿಸಿಕೊಳ್ಳುವ ಆಶಯದಿಂದ ಕಷ್ಟ ಪಟ್ಟು ದುಡಿಯುವ ಜನರು ಇಲ್ಲಿನ ಗ್ರಾಮಸ್ಥರು.

     ಗ್ರಾಮದ ಹೊರವಲಯದ ಬಳಿ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆ ಇದೆ.  ಮಗ್ಗುಲಲ್ಲೇ ಒಂದು ಸಣ್ಣ ಆಟದ ಮೈದಾನವಿದೆ.  ಈ ಶಾಲೆಯ ಪ್ರಗತಿ ಸುಸ್ಥಿತಿಗಳ ಹಿಂದಿನ ಚಾಲಕ ಮತ್ತು ಪ್ರೇರಕ ಶಕ್ತಿ ಎಂದರೆ ಕಳೆದ 16 ವರ್ಷಗಳಿಂದ ಇಲ್ಲಿ ಕರ್ತವ್ಯ ನಿರತರಾಗಿರುವಂತಹ ಉಪಾಧ್ಯಾಯರಾದ ಶ್ರಿ.ಎಚ್.ಎಸ್. ಪರಮೇಶ್ ಅವರು.

     "ಮಕ್ಕಳು ಯಾವುದೇ ಸಾಮಾಜಿಕ, ಆರ್ಥಿಕ ಅಥವಾ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದಿರಲಿ, ಜೀವಂತಿಕೆ ಉತ್ಸಾಹಗಳು ಅವರಲ್ಲಿ ತುಂಬಿ ತುಳುಕುತ್ತಿರುತ್ತದೆ.  ಪ್ರಕೃತಿ ಕುರಿತು ತೀರದ ಕುತೂಹಲ ಹೊಸ ವಿಷಯಗಳನ್ನು ಕಲಿಯಬೇಕೆಂಬ ದಾಹ ಅವರಲ್ಲಿ ಸದಾ ಇರುತ್ತದೆ" ಎಂಬುದು ಶ್ರಿ ಪರಮೇಶ್ ಅವರ ದೃಢನಂಬಿಕೆ ಅಷ್ಟೇ ಅಲ್ಲ ಮಕ್ಕಳು ಶಾಲೆಗೆ ಬರುವಾಗಲೇ ಅನೇಕ ವಿಷಯಗಳನ್ನು ತಿಳಿದುಕೊಂಡೇ ಬರುತ್ತಾರೆ.  ಇಂಥ ಪ್ರತಿಯೊಂದು ಮಗುವಿಗೂ ಕಲಿಕೆಯ ವಾತಾವರಣ ಕಲ್ಪಿಸಿ ಕೊಡಬೇಕಾದದ್ದು ಉಪಾಧ್ಯಾಯರ ಆದ್ಯ ಕರ್ತವ್ಯ ಎಂದು ಸಹ ಇವರು ನಂಬಿರುತ್ತಾರೆ.

     ಶಾಲೆಯಲ್ಲಿ ಒಟ್ಟು 175 ಮಂದಿ ಮಕ್ಕಳಿದ್ದು ಐದು ಜನ ಉಪಾಧ್ಯಾಯರಿದ್ದಾರೆ.  ಅಂದ ಮೇಲೆ ಯಾವುದೇ ಸಮಯದಲ್ಲೂ ಎರಡು ಬೃಹದಾದ ತರಗತಿಗಳನ್ನು ನಡೆಸಲೇ ಬೇಕಾದ ಅನಿವಾರ್ಯತೆ ಇದೆ.  "ಇಲ್ಲ, ಒಂದೇ ಅವಧಿಯಲ್ಲಿ ಎರಡು ತರಗತಿಗಳನ್ನು ನಿರ್ವಹಿಸಿಕೊಂಡು ಬರುವುದು ಕಷ್ಟದ ವಿಷಯವೇನಲ್ಲ.  ಈ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡಿದ್ದೇವೆ.  ಅಲ್ಲದೆ ಆ ತರಬೇತಿ ಮಾಡ್ಯುಲ್ ಬಹುಮುಖಿಯನ್ನು ತಯಾರಿಸಿದ ತಂಡದಲ್ಲಿ ನಾನೂ ಒಬ್ಬ ಸದಸ್ಯನಾಗಿದ್ದೆ.  ಪರಿಸ್ಥಿತಿ ನಿಭಾಯಿಸುವ ಬಗ್ಗೆ ನಾನು ಇತರೆ ಶಿಕ್ಷಕರಿಗೆ ಮಾರ್ಗದರ್ಶನ ನೀಡ ಬಲ್ಲೆ" ಎಂದು ಶ್ರೀ ಪರಮೇಶ್ ಹೇಳುತ್ತಾರೆ

     ಈ ಶಾಲೆಯು 1990ರಲ್ಲಿ 1 ರಿಂದ 4 ನೇ ತರಗತಿಯ ವರೆಗೆ ಶಾಲೆ ನಡೆಸಲು ಎರಡು ಕೊಠಡಿಗಳ ಕಟ್ಟಡದಲ್ಲಿ ಪ್ರಾರಂಭವಾಯಿತು.  ಜನರ ದೇಣಿಗೆ ಪಡೆದು ಪಕ್ಕದ ನಿವೇಶನವನ್ನು ಸಹ ಕೊಳ್ಳಲಾಯಿತು.  ಹೊಸ ಕೊಠಡಿಗಳ ನಿರ್ಮಾಣದ ತರುವಾಯ ಶಾಲೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ.

     ಈ ಶಾಲೆಗೆ ಹತ್ತಿರದ ಪಟ್ಟಣದ ಮಕ್ಕಳೂ  ಬಂದು ಸೇರುತ್ತಿದ್ದಾರೆ!  ಆ ಶಾಲೆ ಹಾಗೂ ಅಲ್ಲಿನ ಉಪಾಧ್ಯಾಯರ ಖ್ಯಾತಿಯೇ ಅಂಥದ್ದು. " ನಾನು ಮೊದಲು ಶಾಲೆಗೆ ಬಂದ ದಿನಗಳಲ್ಲಿ ಮಕ್ಕಳು ಮಧ್ಯಾಹ್ನದ ಹೊತ್ತು ಹಸಿದು ಕೊಂಡು ಇರುತ್ತಿದ್ದರು.  ಆದ್ದರಿಂದಾಗಿ ಅವರಿಗೆ ಪಾಠದ ಕಡೆ ಗಮನ ಕೊಡುವಂತೆ ಮಾಡುವುದು ಸಾಧ್ಯವಿರಲಿಲ್ಲ.  ನಾನು  ನನ್ನ ಕೈನಿಂದಲೇ ಖರ್ಚು ಹಾಕಿಕೊಂಡು 30 ಜನ ಮಕ್ಕಳಿಗೆ ಬಾಳೆ ಹಣ್ಣು ಮತ್ತು ಬನ್ನು ತರುತ್ತಿದ್ದೆ.  ನನ್ನ ಕೆಲವಾರು ಅನುಕೂಲಸ್ಥ ಸ್ನೇಹಿತರಿಗೆ ಇದು ತಿಳಿದಾಗ ಅವರು ಈ ಖರ್ಚನ್ನು ಭರಿಸಲಾರಂಭಿಸಿದರು.  ಈಗ ಮಧ್ಯಾಹ್ನ ಬಿಸಿ ಊಟವನ್ನು ಸರ್ಕಾರವೇ ಒದಗಿಸುತ್ತಿದೆ".ಎನ್ನುತ್ತಾರೆ ಪರಮೇಶ್.  ಇಲಾಖೆಯಿಂದ ಪಡೆದ ಸಮವಸ್ತ್ರವಲ್ಲದೆ ಮಕ್ಕಳಿಗೆ ಬಿಳಿ ಸಮವಸ್ತ್ರ ಹಾಗೂ ಕಪ್ಪು ಶೂ ಗಳನ್ನು ಸಹ ಒದಗಿಸಲಾಗಿದೆ.  ಇದನ್ನು ದಾನಿಗಳು ಮತ್ತು ಸಮುದಾಯದವರು ಒದಗಿಸಿ ಕೊಟ್ಟಿದ್ದಾರೆ.  ಇದರ ಶ್ರೇಯಸ್ಸು ಪರಮೇಶ್ ಅವರಿಗೆ ಸಲ್ಲಬೇಕು.  ಏಕೆಂದರೆ ಸಮುದಾಯದಲ್ಲಿ ಮತ್ತು ತಂದೆ ತಾಯಿಗಳಲ್ಲಿ ಪರಮೇಶ್ ಅಷ್ಟು ಉತ್ತಮವಾದ ಗೌರವವನ್ನು ಉಳಿಸಿಕೊಂಡಿದ್ದಾರೆ.

     ಶಾಲೆಯ ಹೊರ ಗೋಡೆಯ ಮೇಲೆ ಜಪಾನಿ ಭಾಷೆಯ ಅಕ್ಷರಗಳಿವೆ.  ಏನಿದು! ಈ ಶಾಲೆಯ ಮಕ್ಕಳು ಜಪಾನಿ ಭಾಷೆ ಕಲಿಯುತ್ತಿರುವರೇ?  ಇಲ್ಲ, ಈ ಶಾಲಾ ಕೊಠಡಿಗಳ ಕಟ್ಟಡವನ್ನು ವಿನ್ಯಾಸಗೊಳಿಸಿದ ಮತ್ತು ಕಟ್ಟಿಕೊಟ್ಟ ಜಪಾನಿ ಸ್ವಯಂ ಸೇವಾ ಕರ್ತರು ಗೋಡೆಯ ಮೇಲೆ ಜಪಾನಿ ಅಕ್ಷರಗಳನ್ನು ಮತ್ತು ಅವುಗಳ ಇಂಗ್ಲೀಷ್ ಸಮಾನ ಪದಗಳನ್ನು ಬರೆದಿದ್ದಾರೆ.

     ಉತ್ತಮ ಗಾಳಿ ಬೆಳಕು ಬರುವಂತಹ ಶಾಲಾ ಕೊಠಡಿಗಳನ್ನು ಕಟ್ಟಲು ಭೌತಿಕ ಸಹಾಯ ಮತ್ತು ಹಣಕಾಸು ನೆರವನ್ನು  (ಯುನೈಟೆಡ್ ಗೇಮ್ಸ್ ಆಫ್ ನೇಷನ್ಸ್ ) UGN  ಅವರು ಒದಗಿಸಿದ್ದಾರೆ.  ಯುಜಿಎನ್ ನ  ವರ್ನರ್ ಗ್ರೈಸ್ ಅವರು ಈ ಶಾಲೆಗೆ ಭೇಟಿ ನೀಡಿದಾಗ ಅವರು ಪರಮೇಶ್ ಅವರ ಉತ್ಸಾಹ ಮತ್ತು ಕಾರ್ಯಶೈಲಿ ನೋಡಿ ಪುಳಕಿತರಾದರು.  ಫಲವಾಗಿ ಈ ಶಾಲೆಯು ಆಕರ್ಷಕ 5 ಕಿಟಕಿಗಳು ಮತ್ತು ಕಪ್ಪು ಹಲಗೆಗಳನ್ನು  ಹೊಂದಿದೆ.

     ಪರಮೇಶ್ ಅವರು ಏಳು ಜನ ಮಕ್ಕಳಿಗೆ ಶಾಲೆಗೆ ಬರಲು ಸಾರಿಗೆ ಖರ್ಚನ್ನು ಒದಗಿಸಿ ಸಹಾಯ ಮಾಡುತ್ತಿದ್ದಾರೆ.  ಇವರು ಮತ್ತು ಸಮುದಾಯದ ನಡುವೆ ಹಾರ್ದಿಕ ಸಂಬಂಧವಿದೆ.  ಶಾಲಾ ದಿನವಿರಲಿ ಬಿಡುವಿನ ದಿನವಿರಲಿ ಈ ಶಿಕ್ಷಕರು ಇರುವಾಗ ತಂದೆ ತಾಯಿಗಳು ತಮ್ಮ  ಮಕ್ಕಳ ಕ್ಷೇಮಾಭಿವೃದ್ಧಿ ಬಗ್ಗೆ ಆತಂಕ ಪಡುವುದಿಲ್ಲ.

     ಪರಮೇಶ್ ಅವರು ಅನೇಕ ನವನವೀನ ಬೊಧನಾ-ಕಲಿಕೆ ಸಾಮಗ್ರಿಗಳನ್ನು ತಯಾರಿಸಿದ್ದಾರೆ.  ಇದನ್ನು ಎಲ್ಲಾ ಉಪಾಧ್ಯಾಯರು ಮತ್ತು ಮಕ್ಕಳು ಬಳಸಬಹುದಾಗಿದೆ.  ಇವರು ಖಾಲಿ ಬೆಂಕಿ ಪೆಟ್ಟಿಗೆಯಂತಹ ಬಳಸಿ ಬಿಸಾಡಿದ ವಸ್ತುಗಳನ್ನು ಉಪಯೋಗಿಸಿ ಇವುಗಳನ್ನು ತಯಾರಿಸಿರುತ್ತಾರೆ.  ಹೀಗಾಗಿ ಇವುಗಳ ತಯಾರಿಕೆಗೆ ಕಡಿಮೆ ಖರ್ಚು ಆಗುತ್ತದೆ.  ಇವರ ಈ ಸಾಧನೆಗಾಗಿ ಇವರಿಗೆ ರಾಜ್ಯ ಸರ್ಕಾರವು  ಪ್ರಶಸ್ತಿ ನೀಡಿದೆ.  ಪರಮೇಶ್ ಅವರು ತಮ್ಮ ಕೈಯಿಂದಲೇ 40,000/- ರೂಪಾಯಿಗಳನ್ನು ಖರ್ಚು ಮಾಡಿ ಹಿನ್ನೆಲೆ ಸಂಗೀತ ಒದಗಿಸಿ 1ನೇ ತರಗತಿಯಿಂದ ಏಳನೇ ತರಗತಿ ವರೆಗಿನ ಎಲ್ಲಾ ಕನ್ನಡ ಪದ್ಯಗಳನ್ನು ಒಳಗೊಂಡ ಧ್ವನಿ ಸುರಳಿಗಳನ್ನು ತಯಾರಿಸಿದ್ದಾರೆ.  ಈ ವಿದ್ಯಾರ್ಥಿಗಳ ಇತರೆ ಕ್ಷೇತ್ರದ ಸಾಧನೆಯ ಜೊತೆಗೆ ಕಲಿಕೆಯಲ್ಲಿನ ಸಾಧನೆಯೂ ಸಾಕಷ್ಟು ತೃಪ್ತಿಕರವಾಗಿದೆ.  ಶಾಲೆಯಲ್ಲಿ ದೈಹಿಕ ಶಿಕ್ಷಣದ ಉಪಾಧ್ಯಾಯರು ಇಲ್ಲದೇ ಹೋದರೂ ಇಲ್ಲಿನ ಮಕ್ಕಳು ಬ್ಲಾಕು ಮಟ್ಟದಲ್ಲಿ ಖೋ ಖೋ ಮತ್ತಿತರ ಆಟದ ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದಿದ್ದಾರೆ.  ಬ್ಲಾಕು ಮಟ್ಟದ ಪ್ರತಿಭಾಕಾರಂಜಿ ಎಂಬ, ಪ್ರತಿಭಾ ಸ್ಪರ್ಧೆಗಳಲ್ಲಿ ಈ ಮಕ್ಕಳಿಗೆ ಅವರು ಕಲಿತು ಆಡಿದ ನಾಟಕ, ನೃತ್ಯ ಮತ್ತು ಸಂಗೀತಕ್ಕೆ ಬಹುಮಾನಗಳು ಬಂದಿವೆ.  ಇದಕ್ಕೆಲ್ಲಾ ಪರಮೇಶ್ ಅವರ ವೈಯಕ್ತಿಕ ಆಸಕ್ತಿಯೇ ಕಾರಣ.

     ಪರಮೇಶ್ ಅವರು ಆಚರಣೆಗೆ ತಂದ ಹೊಸ ಹೊಸ ವಿಧಾನಗಳು ಈ ರೀತಿ ಇದೆ.  ಮಕ್ಕಳ ತಂದೆ ತಾಯಿಗಳನ್ನು  ಅವರ ಮನೆಗಳಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಭೇಟಿ ಮಾಡಿ ಮಾತನಾಡಿಸುವುದು. ಶೈಕ್ಷಣಿಕ ವ್ಯಾಸಂಗ ಕ್ರಮವನ್ನು ನಿಭಾಯಿಸಲು ಸಾಧ್ಯವಿಲ್ಲದೆ ಕಷ್ಟವಿರುವ ಮಕ್ಕಳಿಗೆ, ಪದೆ ಪದೆ ಶಾಲೆಗೆ  ಗೈರು ಹಾಜರಾದ ಮಕ್ಕಳಿಗೆ ವಿಶೇಷ ಗಮನ ನೀಡುವುದು ಇವೇ ಮುಂತಾದವು.  ಇದರಿಂದ ಇತರೆ ಶಿಕ್ಷಕರೂ  ಸ್ಫೂರ್ತಿಗೊಂಡಿದ್ದಾರೆ.

     ಇಲಾಖೆಯವರು ಏರ್ಪಡಿಸಿದ ಪರಿಹಾರ ಬೋಧನಾ ಕಾರ್ಯಕ್ರಮಗಳ ಬಗ್ಗೆ ಇವರ ಬಿಚ್ಚು ಮಾತಿನ ಅಭಿಪ್ರಾಯ ಹೀಗಿದೆ:  "ವರ್ಷದ ಆರಂಭದಲ್ಲಿ ನಡೆಸುವ ಆರು ವಾರಗಳ ಸೇತು ಕಾರ್ಯಕ್ರಮವಾಗಿ ಕೈಗೊಳ್ಳುವ ಪರಿಹಾರ ಬೋಧನೆ ಏನೇನೂ ಸಾಲದು.  ಈ ಪರಿಹಾರ ಕಾರ್ಯಕ್ರಮವನ್ನು ವರ್ಷವಿಡೀ ನಡೆಸುವ ಬೋಧನಾ ಕಾರ್ಯಕ್ರಮದಲ್ಲಿ ಒಂದುಗೂಡಿಸಿರಬೇಕು.  ಈ ಕಾರ್ಯಕ್ರಮವನ್ನು ಒಂದು ವೈಜ್ಞಾನಿಕ ರೀತಿಯಲ್ಲಿ ನಡೆಸಬೇಕು.  ಉಪಾಧ್ಯಾಯರು ಬಂಡಿಗಟ್ಟಳೆ  ಫಾರಂಗಳನ್ನು ಮತ್ತು ಕೋಷ್ಟಕಗಳನ್ನು  ತುಂಬುವಂತೆ ಮಾಡಿ ಅವರಿಗೆ ಭಾರ ಹೇರಬಾರದು."

ಹೆಸರು: ಎಚ್.ಎಸ್.ಪರಮೇಶ್,

ವಯಸ್ಸು : 40 ವರ್ಷಗಳು

ಸೇವಾನುಭವ: 19 ವರ್ಷಗಳು

ಪ್ರಸಕ್ತ ಶಾಲೆಯಲ್ಲಿ: 16 ವರ್ಷಗಳು ಅನುದಿನ

ವಿದ್ಯಾರ್ಹತೆ: ಬಿ.ಎ (ಹಿಂದಿ ರತ್ನ)- ಟಿ.ಸಿ.ಎಚ್.

ಸಂಪರ್ಕ ಸಂಖ್ಯೆ: 09448524671

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುವುದು

  • ಧ್ವನಿ ಮತ್ತು ದೃಶ್ಯ ವಿಷಯಗಳಿಗೆ ನಿರೂಪಣೆಗಳನ್ನು ಬರೆಯುವುದು;
  • ಶಿಕ್ಷಕರ ತರಬೇತಿ ಕೈಪಿಡಿ ಚೈತನ್ಯದ ರಜಗೆ;
  • ಚೈತನ್ಯ ತಾರಿಣಿ ಬೋ.ಶಿ.ಸಾ  ತಯಾರಿಕೆ ಮತ್ತು ಬಳಕೆ ಕೈಪಿಡಿ
  • ರಾಜ್ಯವ್ಯಾಪಿ ಗಣಿತ ತರಬೇತಿ ಬಹುಮುಖ ಬಹುಗ್ರೇಡು ಬೋಧನೆ ಶಿಕ್ಷಕರಿಗೆ ಕೈಪಿಡಿ;
  • ಬೋಧನೆ-ಕಲಿಕೆ ಸಾಮಗ್ರಿಗಳ ಬಳಕೆ ಕುರಿತು ಟೆಲಿ ಸಮಾಲೋಚನೆಯಲ್ಲಿ ಪ್ಯಾನೆಲ್ ಸದಸ್ಯ.

ಪ್ರಶಸ್ತಿಗಳು:

  • ಬ್ಲಾಕ್ ಹಂತದಿಂದ ರಾಷ್ಟ್ರ ಮಟ್ಟದವರೆಗೆ ಉತ್ತಮ ಶಿಕ್ಷಕ ಪ್ರಶಸ್ತಿ.
  • ಖರ್ಚಿಲ್ಲದೆ ಖಾಲಿ ಬೆಂಕಿ ಪೆಟ್ಟಿಗೆ ಬಳಸಿ ಬೋಧನಾ ಕಲಿಕೆ ಸಾಮಗ್ರಿ ತಯಾರಿಸಿದ್ದಕ್ಕಾಗಿ ರಾಜ್ಯ ಪ್ರಶಸ್ತಿ;
  • ಹಾರ್ವರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳ ಪ್ರಾಧ್ಯಪಕರು, ಸಂದರ್ಶನ ಮಾಡಿದ್ದಾರೆ;
  • ಇವರ ಒಂದು ಸಂದರ್ಶನವನ್ನು ರಾಷ್ಟ್ರ ದೂರದರ್ಶನ ವಾಹಿನಿಯಲ್ಲಿ ಪ್ರಸಾರ ಮಾಡಲಾಗಿದೆ.

---

 

 

 

19170 ನೊಂದಾಯಿತ ಬಳಕೆದಾರರು
7433 ಸಂಪನ್ಮೂಲಗಳು