ಈ ಅಂಕಣಕ್ಕೆ ಕುಡುಗೆ ನೀಡಿ ಕಾಯಕ ಶ್ರದ್ಧೆ

ಇದು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರ ಕಾಯಕ ಶ್ರದ್ಧೆಯ ದೃಶ್ಯ ನಿರೂಪಣೆ.ಹೊನಗಳ್ಳಿಯ(ಮಂಡ್ಯ ಉತ್ತರ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಪದ್ಮ,ಅವರು ತಮಗೆ ಗೊತ್ತುಪಡಿಸಿದ ಕರ್ತವ್ಯಕ್ಕಷ್ಟೇ ಸೀಮಿತವಾಗದೆ ಪೋಷಕರು ಮತ್ತು ವಿದ್ಯಾರ್ಥಿಗಳ ವಿಶ್ವಾಸ ಮತ್ತು ಸಹಕಾರವನ್ನು ಗಳಿಸಿ ಶಾಲೆಯ ಗುಣಮಟ್ಟದ ವರ್ಧನೆಗೆ ಕಾರಣರಾಗಿದ್ದಾರೆ.ಶ್ರೀಮತಿ ಪದ್ಮ ಅಲ್ಲಿಗೆ ಮುಖ್ಯೋಪಾಧ್ಯಾಯರಾಗಿ ಬಡ್ತಿ ಪಡೆದು ಬಂದಾಗ ಶಾಲೆಯ ಹಾಜರಾತಿಯಿಂದ ಹಿಡಿದು ಮೂಲ ಸೌಕರ್ಯದವರೆಗೆ ಬಹಳ ಬದಲಾವಣೆ ಆಗ ಬೇಕಿತ್ತು.

ಇಲ್ಲಿ ಶಾಲೆಗೆ ಬರುವ ಶೇ75 ರಷ್ಟು ಮಕ್ಕಳು  ಅನುಕೂಲವಂಚಿತ ,ಹಿಂದುಳಿದ ಮತ್ತು ಬಡಕುಟುಂಬದಿಂದ ಬಂದವರು. ಇವರಿಗೆ ಇಂಗ್ಲಿಷ್ ,ಕಂಪ್ಯೂಟರ್ ಶಿಕ್ಷಣ ಒದಗಿಸಿ , ಸಮವಸ್ತ್ರ ಇತ್ಯಾದಿಗಳನ್ನು ಸಮುದಾಯದ ದಾನಿಗಳಿಂದ ಪಡೆದುಕೊಂಡು ಸಮರ್ಪಕ ವ್ಯವಸ್ಥೆ,ಗುಣಮಟ್ಟದ ಶಿಕ್ಷಣ ಉತ್ತಮ ಹಾಜರಾತಿ ಯನ್ನು ಕಾಯ್ದುಕೊಂಡು ಬರುತ್ತಾ ಸುತ್ತಮುತ್ತಲ ಖಾಸಗಿ ಶಾಲೆಗಳಿಂದ ತಮ್ಮಮಕ್ಕಳನ್ನು ಬಿಡಿಸಿ ಅನೇಕ ತಂದೆತಾಯಿಯರು ತಮ್ಮಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಮಾಡಿದ್ದಾರೆ. ಉತ್ತಮ ನೇತಾರತ್ವ ಎಂಥ ಬದಲಾವಣೆ ತರಬಲ್ಲದು ಎನ್ನುವುದಕ್ಕೆ ಇದು ಅನುಕರಣೀಯ ಸಾಧನೆ

19210 ನೊಂದಾಯಿತ ಬಳಕೆದಾರರು
7451 ಸಂಪನ್ಮೂಲಗಳು