ಹಗಲುಗನಸು

ಎಲ್ಲಿಯವರೆಗೂ ಮಕ್ಕಳು

ಮನೆಯಲ್ಲಿ ಪೆಟ್ಟುತಿನ್ನುವರೋ,

ಎಲ್ಲಿಯವರೆಗೂ ಮಕ್ಕಳು

ಶಾಲೆಗಳಲ್ಲಿ ಬೈಗಳು ತಿನ್ನುವರೋ,

ಅಲ್ಲಿಯವರೆಗೆ ನನಗೆ ನೆಮ್ಮದಿ ಎಲ್ಲಿಯದು?

ಈ ರೀತಿಯಲ್ಲಿ ಆಲೋಚಿಸಿದ ಶಿಕ್ಷಣ ತಜ್ಞ  ಶ್ರೀ ಗೀಜೂಭಾಯಿ ಬಧೇಕಾ(1885-1939) ಅವರು ಸ್ವಂತ ಪ್ರಯೋಗ ಮತ್ತು ಅನುಭವಗಳ ಹಿನ್ನೆಲೆಯಲ್ಲಿ  ಒಂದು ಹಗಲುಗನಸನ್ನು ಕಂಡರು. ಅದರ ಫಲಶ್ರುತಿಯೇ ಅವರ ಕೃತಿ "ದಿವಾಸ್ವಪ್ನ" ಅಥವಾ ಹಗಲುಗನಸು."ದಿವಾಸಪ್ನ" ಒಂದು ಚಿರಂತನ ಕೃತಿ.೧೯೩೨ ರಲ್ಲಿ ಮೂಲತಃ ಗುಜರಾತಿ ಭಾಷೆಯಲ್ಲಿ ಪ್ರಕಟವಾದ ಈ ಪುಸ್ತಕದ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ.  ಈ ಕೃತಿಯು ಮಕ್ಕಳಿಗೆ ಸ್ವತಂತ್ರ ಮತ್ತು ಸ್ವಾವಲಂಬನೆಯ ವಾತಾವರಣ ಶಾಲೆಗಳಲ್ಲಿ ದೊರಕಬೇಕು ಎಂಬ ಸಿದ್ದಾಂತವನ್ನು ಪ್ರತಿಪಾದಿಸುವುದೇ ಅಲ್ಲದೇ ಅದಕ್ಕೆ ಶಾಶ್ವತ ನೆಲೆಗಟ್ಟನ್ನು ಹಾಕಿಕೊಟ್ಟಿದೆ.

ಮೂಲ : ಶ್ರೀ ಗೀಜೂಭಾಯಿ ಬಧೇಕಾ

ಕನ್ನಡಕ್ಕೆ:ಶ್ರೀ ಬಳೂರಗಿ. ಪ್ರಕಟಣೆ: ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ, ಸೌಜನ್ಯ : ಶ್ರೀ ಅರವಿಂದಗುಪ್ತ.

ಇಳಿನಕಲು ಮಾಡಿಕೊಳ್ಳಿ: divaswapna-kannada.pdf

ಪ್ರತಿಕ್ರಿಯೆಗಳು

prameeladevi's picture

ಒಳ್ಳಯ ಪುಸ್ತಕ , ತುಂಬಾ ಚೆನ್ನಾಗಿದೆ

prameeladevi's picture

ಒಳ್ಳಯ ಪುಸ್ತಕ

20239 ನೊಂದಾಯಿತ ಬಳಕೆದಾರರು
7808 ಸಂಪನ್ಮೂಲಗಳು