ಶಿಕ್ಷಣದಲ್ಲಿ ಬಸವತತ್ವ- ಹನುಮಂತರಾಜು

 ಸಾಮಾಜಿಕ ವ್ಯವಸ್ಥೆಯ ನಡುವೆ ಬದುಕುವ ನಾವು  ಇಂದು  ಸಮಾಜದಲ್ಲಿ ಘಟಿಸುತ್ತಿರುವ ಎಲ್ಲಾ ಆಗು ಹೋಗುಗಳಿಗೆ ಜವಾಬ್ದಾರರಾಗಿದ್ದೇವೆ. ಏಕೆಂದರೆ ಸಾಮಾಜಿಕ ಬೆಳವಣಿಗೆಯ ಕೇಂದ್ರ ಬಿಂದುವಿನಲ್ಲಿ ಚಲಿಸುವ ಶಿಕ್ಷಣವೂ ಮಾನವೋದ್ಧಾರದ ಪ್ರತೀಕವಾಗಿದೆ. ಶೈಕ್ಷ ಣಿಕ ವಲಯವನ್ನು ವೈಜ್ಞಾನಿಕ ಮನೋಭಾವನೆಯ ವ್ಯಾಪ್ತಿಗೆ ಒಳಪಡಿಸಬೇಕಾಗಿದೆ. ಇದು ಎಲ್ಲಾ ವಿಷಯ ಬೋಧ ನೆಯ ತರಗತಿಗೆ ಹೆಚ್ಚು ವ್ಯಾಪಿಸಬೇಕಾಗಿದೆ. ಪುಸ್ತ ಕ ಸಂಸ್ಕೃತಿಯ ಪ್ರತಿಬಿಂಬಕ್ಕೆ  ಸಮೀಪವಾಗಿರುವ ಶಾಲೆಗಳು ಮಗುವಿನ ಮನಸನ್ನು ಅರಳಿಸುವ ಹೂದೋಟಗಳಾಗಿ ಕಾರ್ಯನಿರ್ವಹಿಸುತ್ತಿವೆ. ಒಂದೇ ವರ್ಗ, ಜಾತಿ, ಧರ್ಮದ ಹಿನ್ನೆಲೆಯಲ್ಲಿ ನಾಲ್ಕು ಗೋಡೆಯಿಂದ ಆವರಿಸಿರುವ ಶಾಲಾ ಕೊಠಡಿಯನ್ನು ನೋಡಲು ಸಾಧ್ಯವಿಲ್ಲ. ನಾವು ಬದುಕುತ್ತಿರುವುದು ಸಂವಿಧಾನಬದ್ಧ ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ. ಇಲ್ಲಿ ಎಲ್ಲರಿಗೂ ಮುಕ್ತ ವಾದ ಅವಕಾಶಗಳಿವೆ. ಹನ್ನೆರಡನೆಯ ಶತಮಾನದಲ್ಲಿ ಉಂಟಾದ ವೈಚಾರಿಕ ಕ್ರಾಂತಿಯು ಮನುಕುಲವನ್ನು ಮೌಢ್ಯದ ನಿದ್ರೆಯಿಂದ ಎಚ್ಚ ರಿಸಿ ಆತ್ಮ ವಿಮರ್ಶೆ ಮಾಡಿಕೊಂಡು ತನ್ನತನವನ್ನು ಅರ್ಥಮಾಡಿಕೊಳ್ಳುವಂತೆ ಸಾರಿ ಹೇಳಿತು. ಮಾನವೀಯ ಮೌಲ್ಯದ ಕಡೆಗೆ ಎಚ್ಚರಿಸಿದ ಶರಣ  ಕ್ರಾಂತಿಯು, ಜಾತಿ, ದಾಸ್ಯ , ವರ್ಣ, ಮೌಢ್ಯಮುಂತಾದ ಕಪ್ಪುಚುಕ್ಕೆಗಳನ್ನು ಎತ್ತಿ ತೋರಿಸಿ ಮನುಕುಲವನ್ನು ಚಿಂತನಶೀಲ ಪ್ರವೃತ್ತಿಯ ಕಡೆಗೆ ಕರೆದುಕೊಂಡು ಹೋಗಿ ಅನುಭವ ಮಂಟಪದ ಕೆಳಗಡೆ ಕೂರಿಸಿಕೊಂಡಿತು. ನಿತ್ಯ ಜೀವನದ ಅನುಭವಗ  ಚಿಂತನೆಗೆ ಬಸವಣ್ಣ ವೈಚಾರಿಕತೆಯನ್ನು ಬೆರೆಸಿ ಆತ್ಮ ವಿಮರ್ಶೆಯ ಜೊತೆಗೆ ಚರ್ಚೆಗೆ ಅವಕಾಶಗಳನ್ನು ಒದಗಿಸಿದರು. ಆರೋಗ್ಯಕರವಾದ ಚರ್ಚೆಯಲ್ಲಿ ಭಾಗಿಯಾದ ಅಲ್ಲಮ, ಅಕ್ಕಮಹಾದೇವಿ, ಸಿದ್ಧರಾಮ, ಮಾದಿಗರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮುಂತಾದ ಶರಣರು ಸಮಾನ ಮನಸ್ಕರಾಗಿ ಎಲ್ಲರ ಚಿಂತನೆಗಳನ್ನು ಆಲಿಸಿ ಪ್ರತಿಕ್ರಿಯಿಸುತ್ತಿದ್ದರು. ಇಲ್ಲಿ ಆಯ್ಕೆಮಾಡಿಕೊಳ್ಳುತ್ತಿದ್ದ ವಿಷಯಗಳು ಆಗಿನ ಪ್ರಚಲಿತ ಸನ್ನಿವೇಶಗಳಾಗಿದ್ದವು. ಒಂದೊಂದು ವಿಷಯವನ್ನು ಒರೆಹಚ್ಚಿ, ತಿದ್ದಿತೀಡಿ  ನೀಡಲಾಗುತ್ತಿತು . ತರಗತಿ ಮತ್ತು ಅನುಭವ ಮಂಟಪ: ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಾಲೆಯನ್ನು ಒಂದು ಪುಟ್ಟ ಸಮಾಜವೆಂದು ಪರಿಗಣಿಸಲಾಗಿದೆ. ಈ ಪುಟ್ಟ  ಸಮಾಜದಲ್ಲಿ ಅನುಭವ ಮಂಟಪದ ಒಳ ಗಿನ ಪರಿಧಿಗೆ ಒಳಪಡುವ ಎಲ್ಲಾ ರೀತಿಯ ಮಕ್ಕಳು ನಮಗೆ ಕಾಣಸಿಗುತ್ತಾರೆ. ಮಕ್ಕಳ ಕಲಿಕೆಗೆ ಪಠ್ಯ ಪುಸ್ತ ಕ, ಪಠ್ಯಕ್ಕೆ ಪೂರಕವಾದ ಕಲಿಕೆಯ ಸಾಮಗ್ರಿಗಳ  ಬಳಕೆ ಇವುಗಳನ್ನು ಪಾಠದ ಜೊತೆಯಲ್ಲಿ ಕೊಂಡೊಯ್ಯುವ ವಿಧಾನಾತ್ಮಕ ಬೋಧ ನ ಕಲಿಕೆಯ ಪ್ರಕ್ರಿಯೆಯನ್ನು ಕಾಣುತ್ತೇವೆ. ಕಲಿಕೆಯ ಪ್ರಕ್ರಿಯೆಯಲ್ಲಿ ಮಗುವಿನ ವಿಶಾಲಾತ್ಮಕ ಬೆಳವಣಿಗೆಗೆ ಅವಕಾಶಗಳನ್ನು ಸೃಷ್ಟಿಸುವ ಕೆಲವು ಬೋಧನೆಯ ಜೊತೆಗೆ ನಡೆಯಬೇಕಾಗಿದೆ. ಇದರಲ್ಲಿ ಮಗುವಿನ ಮುಕ್ತ ಅಭಿವ್ಯಕ್ತಿಗೆ ಕೈಗೊಳ್ಳುವ ಚಟುವಟಿಕೆಗಳು ಚಿಂತನಶೀಲ ಅಭಿವ್ಯಕ್ತಿಗೆ ದಾರಿದೀಪವಾಗಬೇಕು. ಸಮಾಜದಲ್ಲಿರುವ ಆಗು ಹೋಗುಗ ನ್ನು ವಿಶ್ಲೇಷಿಸುವ ಪರಿಧಿಗೆ ಮಕ್ಕಳನ್ನು ಕರೆತರಬೇಕಾಗಿದೆ. ಅನುಭವ ಮಂಟಪದ ಸನ್ನಿವೇಶಗಳನ್ನು ತರಗತಿಯಲ್ಲಿ ನಿರ್ಮಿಸಿ ಪ್ರತಿ ಸನ್ನಿವೇಶ ಹಾಗೂ ವಿಷಯಗಳನ್ನು ಗುರುತಿಸಿಕೊಂಡು ಅವುಗಳ ಬಹಿರಂಗ ಚರ್ಚೆಯನ್ನು ತರಗತಿಯಲ್ಲಿ ಕೈಗೊಳ್ಳುವುದರಿಂದ ಮಕ್ಕಳ ಮಾನಸಿಕ ವಿಕಾಸಕ್ಕೆ ಸಹಾಯಕವಾಗುತ್ತದೆ. ಒಂದು ಪ್ರಾಯೋಗಿಕ ಉದಾಹರಣೆಯನ್ನು ಹಂಚಿಕೊಳ್ಳುವುದಾದರೆ ಲಿಂಗ ಸಮಾನತೆಯ ಕುರಿತು ಮಾತನಾಡುವಾಗ ಕೇವಲ ಪುಸ್ತಕದಲ್ಲಿರುವ ವಿಷಯವನ್ನು ಓದಿ ಹಂಚಿಕೊಳ್ಳುವ ವಿಧಾನಕ್ಕಿಂತ ನೈಜ ಸನ್ನಿವೇಶಗಳನ್ನು ತರಗತಿಯ ಒಳಗೆ ತೆಗೆದುಕೊಂಡು ಬಂದಾಗ ಅವುಗಳ ಪೂರ್ಣ ವಿಷಯವನ್ನು ತಿಳಿಸಿ ಚರ್ಚಾ ಮಂಟಪವನ್ನು ವಿದ್ಯಾರ್ಥಿಗಳಿಗೆ ಹಾಕಿ ಕೊಟ್ಟಾಗ ಪ್ರಸ್ತುತ ಸನ್ನಿವೇಶಕ್ಕೆ ವಿಷಯವನ್ನು ಕೊಂಡಿಯಾಗಿ ಬಳಸಿಕೊಳ್ಳಬಹುದಾಗಿದೆ.

ಈ ಚಿತ್ರಣವನ್ನು ತರಗತಿಯಲ್ಲಿ ನೋಡಿದಾಗ ಈಗಲೂ ಕೂಡ ನನಗೆ ನಿಜ ಶರಣೆ ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಸೂಳೆ ಸಂಕವ್ವ ನೆನಪಾಗುತ್ತಾರೆ. ಶರಣರ ಸಮ್ಮುಖದಲ್ಲಿ ತೋರಿದ ಅಕ್ಕನ ಗಟ್ಟಿತನ, ಗಂಡನಿಗೆ ಸರಿಸಮಾನವಾದ ಲಕ್ಕಮ್ಮನ ದಾಸೋಹ ಚಿಂತನೆ ಇವುಗಳು ಪ್ರಸ್ತುತದಲ್ಲಿ ಲಿಂಗ ಸಮಾನತೆಯ ಕುರಿತು ಮಾತನಾಡುವಾಗ ಹೆಚ್ಚು ನೆನಪಾಗುತ್ತವೆ. ಧಾರ್ಮಿಕತೆ, ಜಾತೀಯತೆಯನ್ನು ಕುರಿತು ಮಾತನಾಡುವಾಗ ಅಣ್ಣ ಬಸವಣ್ಣನ ಲೌಕಿಕ ಅನುಭವಾತ್ಮಕ ಚಿಂತನೆಗಳು ಈಗಿನ ಹೊಸ ಧರ್ಮ ಕಟ್ಟುವ ಕಾಯಕದಲ್ಲಿ ನಿರತರಾಗಿರುವ ಮೌಢ್ಯ ಮನುಜರಿಗೆ ಬಸವಣ್ಣನ ಚಿಂತನೆಗಳನ್ನು ಸಂಪೂರ್ಣವಾಗಿ ಓದಿಕೊಂಡಾಗ ಅರಿವಾಗಬಹುದು. ಜಾತಿ, ಮೌಢ್ಯದ ಕುರಿತು ಧನಿ ಎತ್ತಿದವರನ್ನೇ ಕಾಲ ಸರಿದಂತೆ ಧಾರ್ಮಿಕ ದೇವರನ್ನಾಗಿ ಮಾಡಿ ಪೂಜೆಗೆ ಹಣ್ಣು ಕಾಯಿ ಸಿದ್ಧ ಮಾಡುತ್ತಾರೆ. ಶಾಲೆಯಲ್ಲಿ ವಿಭಿನ್ನ ಜಯಂತಿಗಳ ಆಚರಣೆಗಳಲ್ಲಿ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದ್ದರೂ ಅವರೆಲ್ಲರಿಗೂ ಬಸವ ತತ್ವದ ಬೋಧನೆಯ ಆವಶ್ಯಕತೆ ಇದೆ. ಅನುಭವಾತ್ಮಕ ನೆಲೆಯಲ್ಲಿ ತಾತ್ವಿಕ ಸಿದ್ದಾಂತಗಳನ್ನು ಸಮಾಜಕ್ಕೆ ವೈಚಾರಿಕವಾಗಿ ಕೊಡುಗೆ ನೀಡಿದ ವ್ಯಕ್ತಿತ್ವವನ್ನು ಒಂದು ಸಾಂಸ್ಕೃತಿಕ ರಾಜಕಾರಣದ ಅಡಿಯಲ್ಲಿ ಶಾಲೆಯೊಳಗೆ ಪ್ರತಿಷ್ಠಾಪಿಸಲಾಗಿದೆ. ಪತ್ರಿಕೆಗಳನ್ನು ಓದುವ ಸಂಸ್ಕೃತಿ ಇಂದು ಶಾಲೆಯಲ್ಲಿ ಅಭಿವೃದ್ಧಿಯಾಗುತ್ತಿದೆ. ಅವುಗಳನ್ನು ತಾತ್ವಿಕ ಚರ್ಚೆಯ ನೆಲೆಗಟ್ಟಿಗೆ ತರಬೇಕಾದ ಆವಶ್ಯಕತೆ ಇದೆ. ಪ್ರತಿ ವಿಷಯಗಳು ಕೂಡ ವಿಶ್ಲೇಷಣೆಯ ವ್ಯಾಪ್ತಿಗೆ ಒಳಪಟ್ಟಾಗ ಮಕ್ಕಳಲ್ಲಿ ವೈಜ್ಞಾನಿಕ, ಹಾಗೂ ವೈಚಾರಿಕ ಮನೋಭಾವನೆಗಳನ್ನು ಬೆಳಸಲು ಸಾಧ್ಯ. ಹರಕೆಯ ಕುರಿಗಳಾಗಿ ಎಲ್ಲವನ್ನು ಒಪ್ಪಿಕೊಂಡು ಹೋಗುವ ದುರ್ಬಲ ಮನಸ್ಥಿತಿಯನ್ನು ಸೃಷ್ಟಿಸುವ ಬದಲಾಗಿ ಪ್ರಶ್ನಿಸುವ ಮನೋಭಾವ, ಚಿಂತನಶೀಲ ಮನಸ್ಥಿತಿಗಳನ್ನು ಹುಟ್ಟುಹಾಕಬೇಕಾದ ಕೆಲಸವಾಗಬೇಕಾಗಿದೆ. ಮಠ ಸಂಸ್ಕೃತಿ ಮತ್ತು ಸನ್ಯಾಸವನ್ನು ಬಸವಣ್ಣ ಮತ್ತು ಯಾವುದೇ ಶರಣರು ಮಾನ್ಯ ಮಾಡಿರಲಿಲ್ಲ. ಆದರೆ ಇಂದು ಅವುಗಳು ಧಾರ್ಮಿಕ, ಸಾಂಸ್ಕೃತಿಕ ಆವರಣದಲ್ಲಿ ರಾಜಕೀಯ ಏಜೆಂಟ್‌ಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಇಂದ್ರಿಯಗಳನ್ನು ನಿಗ್ರಹಿಸಿ ಸನ್ಯಾಸಿಯಾಗಿದ್ದೇವೆ ಎಂದು ಹೇಳುವವರು ಅತ್ಯಾಚಾರ, ಅನಾಚಾರಗಳ ಹೆಸರಿನಲ್ಲಿ ಸಿಕ್ಕಿಹಾಕಿಕೊಂಡಿರುವ ಉದಾಹರಣೆಗಳು ನಮ್ಮ ಕಣ್ಮುಂದೆ ನಲಿ ದಾಡುತ್ತಿವೆ. ಕಾಯಕ ತತ್ವಕ್ಕೆ ಒಂದು ಬೆಲೆ ಸಿಗುವುದು ನಾವು ಅದನ್ನು ನಿಷ್ಠೆ ಯಿಂದ ಮನಸಾಕ್ಷಿಗೆ ದ್ರೋಹ ಬಗೆಯದಂತೆ ಶಿರಸಾವಹಿಸಿ ನಡೆದುಕೊಂಡಾಗ ಮಾತ್ರ. ಅದು ’ಕಾಯಕದಲ್ಲಿ ನಿರತನಾದೊಡೆ’ ಎಂದು ಹೇಳುವ ಬಸವ ತತ್ವಕ್ಕೆ ನಾವು ಸಲ್ಲಿಸು ನಿಜವಾದ ಗೌರವ. ಕಾಯಕ ಯಾವುದಾದರೇನು? ಮಾಡುವ ಕೆಲಸಕ್ಕೆ ಗೌರವ ಕೊಟ್ಟು ಶ್ರದ್ಧೆಯಿಂದ ಮಾಡಿದಾಗ ಶ್ರಮ ಮೌಲ್ಯವನ್ನು ಎತ್ತಿಹಿಡಿದಂತಾಗುತ ದೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಬಸವ ತತ್ವದ ಸಂಪೂರ್ಣ ಬಳಕೆ ಇಂದು ಆಗಬೇಕಾಗಿದೆ. ಅಂದರೆ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬಿತ್ತಲು ಬಸವ ತತ್ವ ದ ಆಳವನ್ನು ಶೈಕ್ಷಣಿಕ ವ್ಯವಸ್ಥೆಯಲ್ಲಿಪರಿಣಾಮಕಾರಿಯಾಗಿ ಅಳವಡಿಸಿಕೊಳ ಬೇಕಾಗಿದೆ.

 

18999 ನೊಂದಾಯಿತ ಬಳಕೆದಾರರು
7423 ಸಂಪನ್ಮೂಲಗಳು