ಶ್ರೀಮತಿ ಪದ್ಮಜಾ ಎಂ.ಆರ್ ಅವರು ಚಂದ್ರಾಪುರದ ಸರ್ಕಾರಿ ಉನ್ನತ ಪ್ರಾಥಮಿಕಶಾಲೆಯಲ್ಲಿ ನಲಿ ಕಲಿ ಶಿಕ್ಷಕಿಯಾಗಿದ್ದಾರೆ.ಹೊಸತೊಂದು ಯೋಜನೆ ಅಥವಾ ಪ್ರಯೋಗ ಬಂದರೆ ಅದಕ್ಕೆ ಪ್ರತಿರೋಧವೇ ಹೆಚ್ಚು,ಆದರೆ ಅದರ ಒಳಿತಿನ ಅಂಶವನ್ನು ಮನಗಂಡು ಆಸ್ಥೆಯಿಂದ ಮತ್ತು ಉತ್ಸಾಹದಿಂದ ಅನುಷ್ಠಾನಕ್ಕೆ ತಂದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಿರುವ ಶಿಕ್ಷಕರ ಸಾಲಿನಲ್ಲಿ ಶ್ರೀಮತಿ ಪದ್ಮಜಾ...